ಸಂಚಾರ ನಿಯಮ ಉಲ್ಲಂಘಿಸಿದರೆ ಭಾರೀ ದಂಡ – Vijaya Karnataka

ಬೆಳಗಾವಿ : ಪಾರ್ಕಿಂಗ್‌ ನಿಯಮ ಉಲ್ಲಂಘಿಸುವುದು ಮತ್ತು ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ವಾಹನ ನಿಲುಗಡೆ ಮಾಡಿದರೆ ಇನ್ನು ಭಾರೀ ದಂಡ ತೆತ್ತಬೇಕಾಗುತ್ತದೆ. ನಿಯಮ ಉಲ್ಲಂಘಿಸಿದ ವಾಹನಗಳನ್ನು ಎತ್ತಿಕೊಂಡು ಹೋಗಲು ನಗರ ಪೊಲೀಸರು ‘ಟೋಯಿಂಗ್‌ ವಾಹನ’ ವ್ಯವಸ್ಥೆ ಮಾಡಿರುವುದೇ ಇದಕ್ಕೆ ಕಾರಣ. ಬೆಳಗಾವಿ ಸಂಚಾರ ವಿಭಾಗದ ವತಿಯಿಂದ ಎರಡು ಟೋಯಿಂಗ್‌ ವಾಹನಗಳನ್ನು ಶುಕ್ರವಾರ ಕಾರ್ಯಾಚರಣೆಗೆ ಇಳಿಸಲಾಗಿದ್ದು, ನಗರ ಪೊಲೀಸ್‌ ಆಯುಕ್ತ ಬಿ.ಎಸ್‌.ಲೋಕೇಶಕುಮಾರ ಶುಕ್ರವಾರ ಚಾಲನೆ ನೀಡಿದರು.

ರಸ್ತೆ ಅಪಘಾತ : ಗಾಯಾಳು ಸಾವು – Vijaya Karnataka

ಬೆಳಗಾವಿ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಇಲ್ಲಿನ ಹಳೇ ಗಾಂಧಿ ನಗರದ ಮಂಜುನಾಥ ಚನ್ನಪ್ಪ ಸಂಪಗಾಂವಿ ಚಿಕಿತ್ಸೆ ಫಲಿಸದೆ ಶುಕ್ರವಾರ ಮೃತಪಟ್ಟಿದ್ದಾರೆ. ಜೂ. 26ರಂದು ಬೆಳಗಾವಿ-ಬಾಗಲಕೋಟೆ ರಸ್ತೆಯಲ್ಲಿ ಅಪಘಾತ ಸಂಭವಿಸಿತ್ತು. ಈ ಕುರಿತು ಉತ್ತರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಫಿಯಾ ‘ರನ್‌’ಗೆ ಪೊಲೀಸರ ಸಾಥ್‌ – Vijaya Karnataka

ಶಾಂತಿ ಮತ್ತು ಸೌಹಾರ್ದದ ಸಂದೇಶ ನೀಡುವ ನಿಟ್ಟಿನಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ‘ರನ್‌ ಫಾರ್‌ ಹೋಪ್‌’ ಅಭಿಯಾನ ಹಮ್ಮಿಕೊಂಡಿರುವ ದೆಹಲಿ ಮೂಲದ ಯುವತಿ ಸುಫಿಯಾ ಖಾನ್‌ ಅವರನ್ನು ಶುಕ್ರವಾರ ಬೆಳಗ್ಗೆ ನಗರ ಪೊಲೀಸ್‌ ಅಧಿಕಾರಿಗಳು ಸ್ವಾಗತಿಸಿದರು. ಒಟ್ಟು 4035 ಕಿಮೀ. ಓಟದ ಅಭಿಯಾನ ಆರಂಭಿಸಿರುವ ಸುಫಿಯಾ ಶುಕ್ರವಾರ ಮಹಾರಾಷ್ಟ್ರ ಮೂಲಕ ಬೆಳಗಾವಿ ಪ್ರವೇಶಿಸಿದ್ದರು. ಅವರಿಗೆ ಸುವರ್ಣ ವಿಧಾನಸೌಧ ದವರೆಗೂ ಸಾಥ್‌ ನೀಡಿದ ಮಾಳಮಾರುತಿ ಠಾಣೆ ಪಿಐ ಬಿ.ಆರ್‌.ಗಡ್ಡೇಕರ್‌, ಮಾರಿಹಾಳ ಠಾಣೆ ಪಿಐ ವಿಜಯ ಸಿನ್ನೂರ, ಸಂಚಾರ ಠಾಣೆ ಪಿಐ ಆರ್‌.ಆರ್‌.ಪಾಟೀಲ ಮತ್ತಿತರರು ಪ್ರೋತ್ಸಾಹಿಸಿ […]

ಬಯಲು ಸೀಮೆಗೂ ವಿಸ್ತರಣೆಗೊಳ್ಳಲಿದೆ ಗೋಡಂಬಿ – Vijaya Karnataka

ಕಬ್ಬು ಬೆಳೆಯ ಸಂಕಷ್ಟಗಳಿಂದ ಬೇಸತ್ತಿರುವ ಜಿಲ್ಲೆಯ ರೈತರು ಈಗ ಗೋಡಂಬಿ ಬೆಳೆಯ ಕಡೆಗೆ ವಾಲುತ್ತಿದ್ದಾರೆ. ಇದುವರೆಗೆ ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಷ್ಟೆ ಕಂಡು ಬರುತ್ತಿದ್ದ ಗೋಡಂಬಿ ಇನ್ನು ಮುಂದೆ ಬಯಲು ಸೀಮೆಯಲ್ಲೂ ಬೆಳೆದು ನಿಲ್ಲಲಿದೆ. ಗೋಡಂಬಿ ಬೆಳೆ ಸಾಮಾನ್ಯವಾಗಿ ಮಲೆನಾಡು ಮತ್ತು ಅದರ ಸೆರಗು ಹಾಗೂ ಕರಾವಳಿ ಪ್ರದೇಶದ ಹವಾಮಾನಕ್ಕೆ ಹೊಂದಿಕೊಳ್ಳುತ್ತದೆ. ಆದರೆ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳು ಇತ್ತೀಚೆಗೆ ಸಂಶೋಧಿಸಿರುವ ಹೊಸ ಗೋಡಂಬಿ ತಳಿಗಳು ಉಷ್ಣವಲಯಕ್ಕೂ ಒಗ್ಗಿಕೊಳ್ಳುತ್ತಿರುವುದರಿಂದ ರೈತರಿಗೆ ವಾಣಿಜ್ಯ ಬೆಳೆಯ ಹೊಸ ಅವಕಾಶವನ್ನು ತೆರೆದಿದೆ.

ವಿಶೇಷ ರೈಲಿಗೆ ಇಂದು ಚಾಲನೆ – Vijaya Karnataka

ಬೆಳಗಾವಿ: ಬೆಂಗಳೂರು-ಬೆಳಗಾವಿ ಮಧ್ಯೆ ನಿತ್ಯ ಸಂಚರಿಸಲಿರುವ ವಿಶೇಷ ಎಕ್ಸ್‌ಪ್ರೆಸ್‌ ರೈಲಿಗೆ (06526) ರೈಲು ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ ಶನಿವಾರ ಸಂಜೆ 6 ಗಂಟೆಗೆ ಚಾಲನೆ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ರಾಜ್ಯ ಸರಕಾರದ ಮುಖ್ಯಸಚೇತಕ ಗಣೇಶ ಹುಕ್ಕೇರಿ, ವಿಧಾನ ಪರಿಷತ್‌ನ ಪ್ರತಿಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಸರಕಾರದ ಸಂಸದೀಯ ಕಾರ್ಯದರ್ಶಿಗಳಾದ ಮಹಾಂತೇಶ ಕೌಜಲಗಿ, ಡಾ. ಅಂಜಲಿ ನಿಂಬಾಳಕರ, ಮೈಸೂರು ಮಿನರಲ್ಸ್‌ ಚೇರ್ಮನ್‌ ಲಕ್ಷ್ಮೀ ಹೆಬ್ಬಾಳಕರ, ಜಿಪಂ ಅಧ್ಯಕ್ಷೆ […]

ಪಶು ಆಸ್ಪತ್ರೆ ಸುತ್ತಮುತ್ತ ಕುಡುಕರ ಹಾವಳಿ – Vijaya Karnataka

ನೇಗಿನಹಾಳ ಗ್ರಾಮದಲ್ಲಿ ಬಸ್‌ ನಿಲ್ದಾಣ, ಆಸ್ಪತ್ರೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ. ಅದರಲ್ಲಿಯೂ ಪಶು ಆಸ್ಪತ್ರೆಯ ಬಳಿ ಇರುವ ಹಳ್ಳಿ ಸಂತೆ ಸ್ಥಳವಂತೂ ಮದ್ಯವ್ಯಸನಿಗಳ ಆಶ್ರಯತಾಣವಾಗಿ ಮಾರ್ಪಟ್ಟಿದೆ. ಇಲ್ಲಿನ ಪಶು ಚಿಕಿತ್ಸಾಲಯದ ಸುತ್ತಮುತ್ತ ಈ ಮೊದಲು ದನಗಳನ್ನು ನಿಲ್ಲಿಸಲು ಖುಲ್ಲಾ ಜಾಗ ಇತ್ತು. ಆದರೆ ಇದರ ಬಳಿ ಸಂತೆ ಕಟ್ಟೆ ನಿರ್ಮಿಸಿದ್ದು ಅವೈಜ್ಞಾನಿಕವಾಗಿದ್ದು, ಅವಾಂತರಗಳಿಗೆ ಕಾರಣವಾಗಿದೆ. ಇದನ್ನು ನಿರ್ಮಿಸಿ ವರ್ಷಗಳೇ ಕಳೆದರೂ ಇಲ್ಲಿ ಒಂದು ದಿನವೂ ಸಂತೆ ನಡೆದಿಲ್ಲ. ಬದಲಿಗೆ ಇಲ್ಲಿ ನಡೆಯುವುದು ಕುಡುಕರ […]

ಎಪಿಎಂಸಿ ವಿರುದ್ಧದ ಪ್ರತಿಭಟನೆಗೆ ಕೈಜೋಡಿಸಿ – Vijaya Karnataka

ಬೆಳಗಾವಿಯಲ್ಲಿ ಎಪಿಎಂಸಿ ವಿರುದ್ಧ ಜು. 10 ರಂದು ಭಾರತೀಯ ಕೃಷಿಕ ಸಮಾಜ (ಸಂಯುಕ್ತ)ರೈತ ಸಂಘಟನೆ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸಾಮಾಜಿಕ ಹೋರಾಟಗಾರ ಶಿವಾಜಿಅಣ್ಣಾ ಕಾಗಣಿಕರ ಮುಂದಾಳತ್ವದಲ್ಲಿ ನಡೆಯುವ ಪ್ರತಿಭಟನೆಗೆ ಎಲ್ಲ ರೈತರು ಕೈಜೋಡಿಸಬೇಕು ಎಂದು ಭಾರತೀಯ ಕೃಷಿಕ ಸಮಾಜ(ಸಂಯುಕ್ತ) ರೈತ ಸಂಘಟನೆ ರಾಜ್ಯಾಧ್ಯಕ್ಷ ಸಿದಗೌಡಾ ಮೋದಗಿ ಹೇಳಿದರು.

ಎನ್‌ಸಿಇಆರ್‌ಟಿ ಮಾದರಿ ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ – Vijaya Karnataka

10ನೇ ತರಗತಿ ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಪ್ರಶ್ನೆಗಳ ಬದಲಾಗಿ ಪ್ರಾಯೋಗಿಕ ಮಾದರಿ ಪ್ರಶ್ನೆಗಳನ್ನು ನೀಡಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಗುಣಮಟ್ಟ ವೃದ್ಧಿಸಲು ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ ‘ಶಿಕ್ಷಣ ಮತ್ತು ಶಿಕ್ಷಕರ ತರಬೇತಿ ಸಂಸ್ಥೆ’ (ಡಯಟ್‌) ಮುಂದಾಗಿವೆ. ‘ನ್ಯೂಟನ್‌ನ ಮೂರನೇ ನಿಯಮ ಯಾವುದು?’ ಎಂದು ಕೇಳುವ ಸಾಂಪ್ರದಾಯಿಕ ಪ್ರಶ್ನೆ ಜತೆಗೆ ‘ಗೋಡೆಗೆ ಚೆಂಡು ಎಸೆದರೆ ಚೆಂಡು ಮರಳಿ ಬರುತ್ತದೆ- ಇದು ಯಾವ ನಿಯಮ?’ ಈ ರೀತಿಯ ಪ್ರಶ್ನೆಗಳನ್ನು ಈ ವರ್ಷದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪೂರ್ವ ಸಿದ್ಧತೆ ಪರೀಕ್ಷೆಯಲ್ಲಿ ಎದುರಿಸಲಿದ್ದಾರೆ.

ಬೆಳಗಾವಿ-ಬೆಂಗಳೂರು ಸೂಪರ್‌ ಫಾಸ್ಟ್‌ ರೈಲು; ಶಾಸಕ ಕೌಜಲಗಿ ಸ್ವಾಗತ – Vijaya Karnataka

ಬೆಳಗಾವಿ- ಬೆಂಗಳೂರು ಸೂಪರ್‌ ಫಾಸ್ಟ್‌ ನೂತನ ರೈಲು ಸಂಚಾರ ಪ್ರಾರಂಭಿಸಿದ ಕೇಂದ್ರ ರೇಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಕಾರ್ಯವನ್ನು ಸಂಸದೀಯ ಕಾರ್ಯದರ್ಶಿ, ಶಾಸಕ ಮಹಾಂತೇಶ ಕೌಜಲಗಿ ಸ್ವಾಗತಿಸಿದರು. ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಸಂಸದರ ಕಾರ್ಯ ಅಭಿನಂದನೀಯವಾಗಿದೆ. ಈ ಹಿಂದೆ ಶಿವಾನಂದ ಕೌಜಲಗಿ ಸಂಸದರಾಗಿದ್ದಾಗ ಕಿತ್ತೂರ-ಬೈಲಹೊಂಗಲ ಶ್ರೀ ಕ್ಷೇತ್ರ ಸೊಗಲ-ಮುನವಳ್ಳಿ-ಯಲ್ಲಮ್ಮನಗುಡ್ಡ ಮಾರ್ಗವಾಗಿ ಧಾರವಾಡಕ್ಕೆ ರೈಲು ಪ್ರಾರಂಭಿಸಲು ಸರ್ವೆ ಮಾಡುವ ಕೆಲಸವನ್ನು ರೈಲ್ವೆ ಆಯವ್ಯಯದಲ್ಲಿ ಸೇರಿಸಿದ್ದರು. ಈ ಕಾರ್ಯ ನೆರವೇರಿಸಲು ಮಾಜಿ ಪ್ರಧಾನಿ […]

ಕಸದ ಆಗರವಾದ ಪೀರನವಾಡಿ ಪರಿಸರ – Vijaya Karnataka

ನಗರಕ್ಕೆ ಹೊಂದಿಕೊಂಡೇ ಇರುವ ಪೀರನವಾಡಿ ಗ್ರಾಮ ಪಂಚಾಯಿತಿ, ತನ್ನ ವ್ಯಾಪ್ತಿಯಲ್ಲಿ ನಿತ್ಯ ಉತ್ಪಾದನೆಯಾಗುವ ತ್ಯಾಜ್ಯವನ್ನು ಸರಿಯಾಗಿ ನಿರ್ವಹಿಸದಿರುವುದು ಅಲ್ಲಿನ ಪರಿಸರ ಮತ್ತು ಜನವಸತಿ ಮೇಲೆ ಕೆಟ್ಟ ಪರಿಣಾಮ ಬೀರಿದೆ.