ಕಸದಿಂದ ಗೊಬ್ಬರ ತಯಾರಿಕೆ ಘಟಕ ಸ್ಥಗಿತ – Vijaya Karnataka

ಲಕ್ಷಾಂತರ ರೂ. ವ್ಯಯಿಸಿ ನಿಪ್ಪಾಣಿ ನಗರಸಭೆ ನಿರ್ಮಿಸಿರುವ ಕಸದಿಂದ ಗೊಬ್ಬರ ತಯಾರಿಸುವ ಘಟಕ ಸಮರ್ಪಕ ನಿರ್ವಹಣೆ ಕೊರತೆಯಿಂದಾಗಿ ತುಕ್ಕು ಹಿಡಿದಿದೆ. ನಗರಸಭೆಯು ಪಟ್ಟಣಕುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ12 ಎಕರೆ 33 ಗುಂಟೆ ಜಾಗ ಖರೀದಿಸಿ ಕಸ ವಿಲೇವಾರಿ ಕೇಂದ್ರ ನಿರ್ಮಿಸಿದ್ದು, ಇಲ್ಲಿನಿಪ್ಪಾಣಿ ನಗರದ ಎಲ್ಲಕಸವನ್ನು ಸಂಗ್ರಹಿಸಲಾಗುತ್ತಿದೆ. ಈ ಕಸದಿಂದ ಗೊಬ್ಬರ ತಯಾರಿಸುವ ಘಟಕವನ್ನು ಇಲ್ಲಿಸ್ಥಾಪಿಸಲಾಗಿದೆ. ಈ ಯೋಜನೆಗೆ ಲಕ್ಷಾಂತರ ರೂ. ಖರ್ಚು ಮಾಡಿ ಅತ್ಯಾಧುನಿಕ ಯಂತ್ರಗಳನ್ನು ಖರೀದಿಸಲಾಗಿದೆ. ಎರೆಹುಳು ಗೊಬ್ಬರ ತಯಾರಿಸುವ ಸಲುವಾಗಿ ಶೆಡ್‌ ಮತ್ತು ಕಾಂಕ್ರೀಟ್‌ ಟ್ಯಾಂಕ್‌ […]

ಟಿಕೆಟ್‌ ಹಂಚಿಕೆ ಮಾಡುವುದು ನಾವಲ್ಲ, ಹೈಕಮಾಂಡ್‌ – Vijaya Karnataka

ಬೆಳಗಾವಿ: ”ಶಾಸಕ ಉಮೇಶ ಕತ್ತಿ ಅವರಾಗಲಿ, ನಾನಾಗಲಿ ಟಿಕೆಟ್‌ ಕೊಡುವುದಿಲ್ಲ. ಹೈಕಮಾಂಡ್‌ ಟಿಕೆಟ್‌ ಹಂಚಿಕೆ ಕುರಿತು ತೀರ್ಮಾನ ತೆಗೆದುಕೊಳ್ಳುತ್ತದೆ. ಅದರ ಪ್ರಕಾರ ನಾವು ನಡೆದುಕೊಳ್ಳುತ್ತೇವೆ” ಎಂದು ಉಪಮುಖ್ಯಮಂತ್ರಿ ಲಕ್ಪ್ಮಣ ಸವದಿ ಹೇಳಿದ್ದಾರೆ. ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ನಾನು ಅನರ್ಹ ಶಾಸಕ ಮಹೇಶ ಕುಮಠಳ್ಳಿಗೆ ಬೈದಿದ್ದಾಗಿ ಹೇಳಿ ಬಹಳ ಹಿಂದಿನ ವಿಡಿಯೊವನ್ನು ಈಗ ವೈರಲ್‌ ಮಾಡಿದ್ದಾರೆ. ನಮ್ಮ ಪರವಾಗಿ ಬ್ಯಾಟಿಂಗ್‌ ಮಾಡಿದರೂ ಸ್ವಾಗತ. ವಿರೋಧ ಮಾಡಿದರೂ ಸ್ವಾಗತ ಮಾಡುತ್ತೇನೆ. ಎಲ್ಲರಿಗೂ ಒಳ್ಳೆಯದಾಗಲಿ” ಎಂದರು.

ಕುಂದಾ ನಗರಿಯಲ್ಲಿ ಗಮನಸೆಳೆದ ಹಾಫ್‌ ಮ್ಯಾರಥಾನ್‌ – Suvarna News

ಬೆಳಗಾವಿ(ಸೆ.30): ನಗರದಲ್ಲಿ ರೇಜಿಡೆನಾ ರೆಸಾರ್ಟ್‌ ಮತ್ತು ಕೆನರಾ ಬ್ಯಾಂಕ್‌ ಪ್ರಾಯೋಜಕತ್ವದಲ್ಲಿ ಲೇಕ್‌ವ್ಯೂ ಹಾಸ್ಪಿಟಲ ರೋಟರಿ ಕ್ಲಬ್‌ ಆಫ್‌ ವೇಣುಗ್ರಾಮ್‌ ಮತ್ತು ವಿವಿಧ ಸಂಘಟನೆಗಳ ಆಶ್ರಯದಲ್ಲಿ ವಿಶ್ವ ಹೃದಯ ದಿನದ ನಿಮಿತ್ತ  ಭಾನುವಾರ ಆಯೋಜಿಸಿದ್ದ ಹಾಫ್‌ ಮ್ಯಾರಥಾನ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು ಕರ್ನಾಟಕ, ಮಹಾರಾಷ್ಟ್ರ, ಗೋವಾ ಸೇರಿ ಹಲವು ರಾಜ್ಯಗಳಿಂದ ಸಾವಿರಾರು ಜನರು ಮ್ಯಾರಥಾನ್‌ದಲ್ಲಿ ಭಾಗಿಯಾಗುವ ಮೂಲಕ ಯಶಸ್ವಿಗೊಳಿಸಿದರು.

370 ವಿಧಿ ರದ್ದತಿಯಿಂದ ಬೆಳಗಲಿದೆ ಜಮ್ಮು- ಕಾಶ್ಮೀರ – Vijaya Karnataka

ಬೆಳಗಾವಿ: ಆರ್ಟಿಕಲ್‌ 370 ರದ್ದು ಪಡಿಸಿರುವುದರಿಂದ ಇನ್ನು ಮುಂದೆ ಜಮ್ಮು-ಕಾಶ್ಮೀರದ ಭಾಗ್ಯ ಬೆಳಗಲಿದೆ. ಇದರಿಂದ ಸ್ಥಳೀಯರಿಂದ ಹಿಡಿದು ಇಡೀ ದೇಶಕ್ಕೆ ಒಳಿತಾಗಲಿದೆ ಎಂದು ಕುಡಚಿ ಕ್ಷೇತ್ರದ ಶಾಸಕ, ಬಿಜೆಪಿ ರಾಷ್ಟ್ರೀಯ ಏಕತಾ ಅಭಿಯಾನದ ಮುಖ್ಯ ವಕ್ತಾರ ಪಿ. ರಾಜೀವ ಹೇಳಿದರು. ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿಉತ್ತರ ಕ್ಷೇತ್ರದ ಬಿಜೆಪಿ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರೀಯ ಏಕತಾ ಅಭಿಯಾನ ಜನಜಾಗೃತಿ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ಮಾಜಿ ಶಾಸಕ ಹಿಸೋಬಕರ್‌ ನಿಧನ – Vijaya Karnataka

ಬೆಳಗಾವಿ: ಮಾಜಿ ಶಾಸಕಅರ್ಜುನರಾವ್‌ ಹಿಸೋಬಕರ್‌(82) ಇಲ್ಲಿನ ಟಿಳಕವಾಡಿಯಲ್ಲಿರುವ ಸ್ವಗ್ರಹದಲ್ಲಿಶುಕ್ರವಾರ ಬೆಳಗ್ಗೆ ನಿಧನರಾದರು. ಬೆಳಗಾವಿ ನಗರ ಕ್ಷೇತ್ರದ ಶಾಸಕರಾಗಿದ್ದ ಬಾಪುಸಾಹೇಬ ಮಾಳಗಾಂವಕರ್‌ ಅಕಾಲಿಕ ನಿಧನರಾಗಿದ್ದರಿಂದ 1992ರಲ್ಲಿನಡೆದ ಉಪಚುನಾವಣೆಯಲ್ಲಿ ಇವರು ಎಂಇಎಸ್‌ನಿಂದ ಆಯ್ಕೆಯಾಗಿದ್ದರು. ಮರಾಠಾ ಬ್ಯಾಂಕ್‌ ಚೇರ್ಮನ್‌, ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಮೃತರು ಪತ್ನಿ, ಮೂವರು ಪುತ್ರರು, ಐವರು ಪುತ್ರಿಯರನ್ನು ಅಗಲಿದ್ದಾರೆ. ಶಹಾಪುರ ಸ್ಮಶಾನದಲ್ಲಿಸಂಜೆ ನಡೆದ ಅಂತ್ಯಕ್ರಿಯೆಯಲ್ಲಿಗಣ್ಯರು ಪಾಲ್ಗೊಂಡಿದ್ದರು.    

ಪ್ರೇಮಿಗಳ ಸುಲಿಗೆಕೋರರ ಬಂಧನ – Vijaya Karnataka

ಬೆಳಗಾವಿ: ವಿಹಾರಕ್ಕೆ ತೆರಳುತ್ತಿದ್ದ ಪ್ರೇಮಿಗಳನ್ನು ತಡೆದು ಸುಲಿಗೆ ಮಾಡುತ್ತಿದ್ದ ಕಳ್ಳರನ್ನು ಶುಕ್ರವಾರ ಕಾಕತಿ ಠಾಣೆ ಪೊಲೀಸರು ಬಂಧಿಸಿ, ಆರೋಪಿಗಳಿಂದ 2.68ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ. ಬೆಳಗಾವಿ ತಾಲೂಕಿನ ಜುಮನಾಳ ಗ್ರಾಮದ ಕೆಂಚಪ್ಪ ನಾಯಿಕ (25) ಹಾಗೂ ಬೈಲೂರ ಗ್ರಾಮದ ಲಗಮಪ್ಪ ನಾಯಿಕ (24) ಬಂಧಿತರು. ಇನ್ನಿಬ್ಬರು ಆರೋಪಿಗಳಾದ ಸೋನಟ್ಟಿ ಗ್ರಾಮದ ಬಾಳೇಶ ಹುಲ್ಲಪ್ಪ ನಾಯಿಕ ಮತ್ತು ನಾಗಪ್ಪ ಉಫ್‌ರ್‍ ಪಿಂಟು ಭೀಮಪ್ಪ ಕರವಿನಕೊಪ್ಪ ಎಂಬುವವರು ತಲೆಮರೆಸಿಕೊಂಡಿದ್ದಾರೆ.

ಅಪರಿಚಿತ ವಾಹನ ಬಡಿದು ವ್ಯಕ್ತಿ ಸಾವು – Vijaya Karnataka

ಬೆಳಗಾವಿ: ಸಮೀಪದ ಭೂತರಾಮನಹಟ್ಟಿ ಗ್ರಾಮದ ಶೇಖ್‌ ಕಾಲೇಜು ಬಳಿ ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ವ್ಯಕ್ತಿಗೆ ಅಪರಿಚಿತ ವಾಹನ ಬಡಿದು ಸ್ಥಳದಲ್ಲಿಮೃತಪಟ್ಟಿದ್ದಾನೆ. ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಶುಕ್ರವಾರ ಬೆಳಗಿನ ಜಾವ ವಾಹನ ಬಡಿದು ಗಾಯಗೊಂಡಿದ್ದ ವ್ಯಕ್ತಿಯನ್ನು ಜಿಲ್ಲಾಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಭೂತರಾಮನಹಟ್ಟಿಯ ಲಕ್ಷ್ಮೇಗಲ್ಲಿನಿವಾಸಿ ಮಹಾಂತೇಶ ರಾಯಪ್ಪ ಬೂದಿ ಎಂಬುವವರು ದಾಖಲಿಸಿದ ದೂರಿನನ್ವಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಟಿಕ್‍ಟಾಕ್ ಮಾಡಲು ಕ್ಯಾಮೆರಾ, ಲ್ಯಾಪ್‍ಟಾಪ್ ಕದ್ದ ವಿದ್ಯಾರ್ಥಿಗಳು – Public TV

ಬೆಳಗಾವಿ: ಟಿಕ್‍ಟಾಕ್ ಮಾಡಲು ಕ್ಯಾಮೆರಾ, ಲ್ಯಾಪ್ ಟಾಪ್, ಶೋಕಿಗಾಗಿ ಬೈಕ್ ಕಳ್ಳತನ ಮಾಡಿದ್ದ ಮೂವರು ವಿದ್ಯಾರ್ಥಿಗಳು ಅಂದರ್ ಆದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಪದವಿ ಓದುತ್ತಿರುವ ವಿದ್ಯಾರ್ಥಿಗಳಾದ ಸಂತೋಷ್, ಸಂಪತ್, ಮತ್ತೊಬ್ಬ ವಿದ್ಯಾರ್ಥಿ ಪ್ರತಿದಿನವೂ ಮೊಬೈಲ್‍ನಲ್ಲಿ ಟಿಕ್‍ಟಾಕ್ ಮಾಡಿ ಅಪ್‍ಲೋಡ್ ಮಾಡುತ್ತಿದ್ದರು. ಅಂದುಕೊಂಡ ಮಟ್ಟಿಗೆ ಲೈಕ್ ಕಮೆಂಟ್ ಬಾರದ್ದಕ್ಕೆ ತಮ್ಮ ವರಸೆ ಬದಲಿಸಿದ ಮೂವರು ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಲು, ಹುಡುಗಿಯರನ್ನು ಇಂಪ್ರೆಸ್ ಮಾಡಲು ಪ್ಲಾನ್ ಮಾಡಿದ್ದರು. ಫೋಟೋ ಸ್ಟುಡಿಯೋ ಒಂದಕ್ಕೆ ನುಗ್ಗಿ ಅಲ್ಲಿದ್ದ ಹೈಕ್ವಾಲಿಟಿ ಕ್ಯಾಮೆರಾ, ಲ್ಯಾಪ್ […]

ಚುನಾವಣೆ ನಡೆದಿದ್ದರೆ ಒಳ್ಳೆಯದಿತ್ತು: ರಮೇಶ್ ಜಾರಕಿಹೊಳಿ – One India Kannada

ಬೆಳಗಾವಿ, ಸೆಪ್ಟೆಂಬರ್ 26: “ನಮ್ಮ ಸ್ನೇಹಿತರು ಚುನಾವಣೆ ಮುಂದೆ ಹೋಗಬೇಕು ಎಂದು ಬಯಸಿದ್ದರು. ಆದರೆ ವೈಯಕ್ತಿಕವಾಗಿ, ಚುನಾವಣೆ ನಡೆದಿದ್ದರೆ ಒಳ್ಳೆಯದಿತ್ತು ಎನಿಸುತ್ತಿದೆ” ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು.