ಶನಿವಾರ, ಭಾನುವಾರ ಪೂರ್ಣ ದಿನ ಶಾಲೆ – Vijaya Karnataka

ಬೆಳಗಾವಿ: ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆ ಕಾರಣದಿಂದ ಶಾಲೆಗಳಿಗೆ ನೀಡಿದ್ದ ರಜೆ ಅವಧಿಯ ಪಠ್ಯಕ್ರಮವನ್ನು ಸರಿದೂಗಿಸುವ ಉದ್ದೇಶದಿಂದ ಆಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳ ಶನಿವಾರ, ಭಾನುವಾರಗಳಂದು ಶಾಲೆ ನಡೆಸುವಂತೆ ಎರಡೂ ಶೈಕ್ಷಣಿಕ ಜಿಲ್ಲೆಗಳ ಡಿಡಿಪಿಐಗಳು ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಆ.17, 18, 24, 25, 31 ಹಾಗೂ ಸೆ.7, 8, 14, 21ರ ಶನಿವಾರ ಮತ್ತು ಭಾನುವಾರಪೂರ್ಣ ದಿನ ಶಾಲೆ ನಡೆಸಿ ಬೋಧನಾ ಕಲಿಕೆ ಸರಿದೂಗಿಸುವಂತೆ ಆದೇಶದಲ್ಲಿ ಸೂಚನೆ ನೀಡಲಾಗಿದೆ. ಧಾರಾಕಾರ ಮಳೆ ಕಾರಣದಿಂದ ಎರಡೂ ಶೈಕ್ಷಣಿಕ ಜಿಲ್ಲೆಯಲ್ಲಿ ಜು.31 ಮತ್ತು ಆ.6 ರಿಂದ 10ರವರೆಗೆ […]

ಜೆಡಿಎಸ್‌ ಜಿಲ್ಲಾಧ್ಯಕ್ಷ ರ ಬದಲಾವಣೆಗೆ ಆಗ್ರಹ – Vijaya Karnataka

ಬೆಳಗಾವಿ: ಜಿಲ್ಲಾ ಜಾತ್ಯತೀತ ಜನತಾದಳದ ಅಧ್ಯಕ್ಷ ಸ್ಥಾನದಿಂದ ಶಂಕರ ಮಾಡಲಗಿ ಅವರನ್ನು ಬದಲಾಯಿಸಿ ಬೇರೆಯವರನ್ನು ನೇಮಕ ಮಾಡಬೇಕೆಂದು ಜೆಡಿಎಸ್‌ ಕಾರ್ಯಕರ್ತರು ಮತ್ತು ಇತರೆ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಶಂಕರ ಮಾಡಲಗಿ ತಾವೊಬ್ಬರೇ ಪಕ್ಷವೆಂಬಂತೆ ಓಡಾಡುತ್ತಿದ್ದಾರೆ. ವೈಯಕ್ತಿಕ ಲಾಭವನ್ನಷ್ಟೇ ನೋಡುತ್ತಿದ್ದಾರೆ. ಕಾರ್ಯಕರ್ತ ಮತ್ತು ಇತರೆ ಪದಾಧಿಕಾರಿಗಳಿಗೆ ಗೌರವ ನೀಡುತ್ತಿಲ್ಲ. ಪಕ್ಷದ ಹಿರಿಯರು ಜಿಲ್ಲೆಗೆ ಬಂದಾಗ ಮಾಹಿತಿಯನ್ನು ಪದಾಧಿಕಾರಿಗಳಿಗೆ ಕೊಡುವುದಿಲ್ಲ. ನೆರೆ ಸಂತ್ರಸ್ತರನ್ನು ಭೇಟಿ ಮಾಡಲು ನಿಖಿಲ್‌ ಕುಮಾರಸ್ವಾಮಿ, ಎನ್‌.ಎಚ್‌. ಕೋನರಡ್ಡಿಅವರು ಬಂದಾಗಲೂ ಹೀಗೆ ಆಗಿದೆ. […]

Transporters offer free ferrying of relief material – The New Indian Express

Transporters have lived up to their name this calamity that ravaged the state. Several transport companies from Belagavi, Bengaluru, Hubballi and Karwar have come forward to transport relief material free of cost. A transport company based in Hubballi has rendered close to 200 free trips from Bengaluru, Belagavi and Hubballi to flood-affected villages.  

ರೈಲು ನಿಲ್ದಾಣದಲ್ಲಿ ಬೃಹತ್‌ ರಾಷ್ಟ್ರ ಧ್ವಜ – Vijaya Karnataka

ಬೆಳಗಾವಿ: ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ 100 ಅಡಿ ಎತ್ತರದ ‘ಸ್ಮಾರಕ ರಾಷ್ಟ್ರಧ್ವಜ ಸ್ತಂಭ’ದ ಮೇಲೆ ರಾಷ್ಟ್ರ ಧ್ವಜ ಹಾರಿಸಲಾಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ. 15 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸ್ಮಾರಕ ಧ್ವಜ ಸ್ತಂಭದಲ್ಲಿ 20*30 ಅಡಿ ಅಳತೆಯ ರಾಷ್ಟ್ರಧ್ವಜ ದಿನದ 24 ಗಂಟೆಗಳ ಕಾಲವೂ ಹಾರಾಡಲಿದೆ. ದೇಶದ 75 ರೈಲ್ವೆ ನಿಲ್ದಾಣಗಳಲ್ಲಿ 100 ಅಡಿ ಎತ್ತರದ ಸ್ಮಾರಕ ಧ್ವಜ ಸ್ಥಂಭ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಆ ಪೈಕಿ ನೈರುತ್ಯ ರೈಲ್ವೆ ವಿಭಾಗದ ಬೆಂಗಳೂರು, ಯಶವಂತಪುರ ಮತ್ತು ಹುಬ್ಬಳ್ಳಿ ರೈಲ್ವೆ ನಿಲ್ದಾಣಗಳಲ್ಲಿ […]

ಕರ್ನಾಟಕದ ಹೆಮ್ಮೆ ಕೆಎಲ್‌ಇ; ಕಾಶ್ಮೀರದಲ್ಲಿಯೂ ತಲೆ ಎತ್ತಲಿದೆ! – Suvarna News

ದೇಶದ ಕಿರೀಟದಂತಿರುವ ಕಾಶ್ಮೀರ ಇದೀಗ ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ ಶೀಘ್ರದ ಲ್ಲಿಯೇ ಕೆಎಲ್‌ಇ ಸಂಸ್ಥೆಯಿಂದ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಕೆಎಲ್‌ಇ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ತಿಳಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಕೆಎಲ್‌ಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ೭೩ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಮೋದಿ ಪ್ರಧಾನಿ ಆದ ಬಳಿಕ ಅಭಿವೃದ್ಧಿ ಪರ್ವ ಆರಂಭವಾಗಿದೆ ಎಂದರು.      

ಝೀರೊಪಾಯಿಂಟ್‌ ಪುನರ್ವಸತಿ ಕೇಂದ್ರದ ಸ್ಥಳ ಬದಲಾಯಿಸಲು ಆಗ್ರಹ – Vijaya Karnataka

ಅಥಣಿ: ತಾಲೂಕಿನ ನಂದೇಶ್ವರ ಗ್ರಾಮದ ಹತ್ತಿರದ ಪುನರ್ವಸತಿ ಕೇಂದ್ರ ಝೀರೊಪಾಯಿಂಟ್‌ ಪುನರ್ವಸತಿ ಕೇಂದ್ರದ ಸ್ಥಳ ಬದಲಾಯಿಸುವಂತೆ ಹಿಪ್ಪರಗಿ ಅಣೆಕಟ್ಟು ಹಿನ್ನೀರಿನ ಹಿತರಕ್ಷ ಣಾ ಸಮಿತಿ ಅಧ್ಯಕ್ಷ ರಮೇಶಗೌಡ ಪಾಟೀಲ ಒತ್ತಾಯಿಸಿದ್ದಾರೆ.

ಗ್ಯಾರೇಜ್‌ಗಳ ಮುಂದೆ ಈಗ ವೆಹಿಕಲ್‌ ಕ್ಯೂ! – Vijaya Karnataka

ಜಿಲ್ಲೆಯ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿರುವ ಪ್ರವಾಹದ ಅಬ್ಬರಕ್ಕೆ ಸಿಲುಕಿದ ಲೆಕ್ಕವಿಲ್ಲದಷ್ಟು ವಾಹನಗಳು ದುರಸ್ತಿಗಾಗಿ ಈಗ ಗ್ಯಾರೇಜ್‌ ಮುಂದೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೌದು. ನೆರೆ ಬಂದಾಗ ಜನರೇನೋ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಗೊಂಡರು. ಆದರೆ, ಅವರ ವಾಹನಗಳೆಲ್ಲ ನಿಂತಲ್ಲೇ ಇದ್ದವು. ಪ್ರವಾಹದ ನೀರಿನಲ್ಲಿ ನಾಲ್ಕಾರು ದಿನ ನಿಂತಿದ್ದ ಅವೆಲ್ಲ ಈಗ ಜರ್ಝರಿತ ಸ್ಥಿತಿಯಲ್ಲಿವೆ. ಈಗಾಗಲೇ ಮನೆ ಕುಸಿತ ಸೇರಿದಂತೆ ನಾನಾ ರೀತಿಯ ಸಮಸ್ಯೆ ಎದುರಿಸುತ್ತಿರುವ ಜನರಿಗೆ ಈಗ ವಾಹನಗಳ ದುರಸ್ತಿಯ ದುಬಾರಿ ಖರ್ಚನ್ನು ಭರಿಸುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.