ಬಾಲಕಿಯರ ಮಾರಾಟಕ್ಕೆ ಯತ್ನಿಸಿದವರಿಗೆ ಜೀವಾವಧಿ ಶಿಕ್ಷೆ- Vijaya Karnataka

ಬೆಳಗಾವಿ: ಮಾನವ ಕಳ್ಳ ಸಾಗಣೆಗೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ನಡೆಸಿದ ಇಲ್ಲಿನ 3ನೇ ಜಿಲ್ಲಾಮತ್ತು ಸತ್ರ ನ್ಯಾಯಾಲಯ ಹಾಗೂ ಎಸ್ಸಿ, ಎಸ್ಟಿ ಮತ್ತು ಪೋಕ್ಸೋ ವಿಶೇಷ ನ್ಯಾಯಾಲಯ ಸೋಮವಾರ ಮೂವರು ಅಪರಾಧಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. ಚನ್ನಮ್ಮನ ಕಿತ್ತೂರು ತಾಲೂಕಿನ ಹೊಳಿನಾಗಲಾಪುರ ಗ್ರಾಮದ ಮಂಜುಳಾ ಅಡಿವೆಪ್ಪ ಚೌಡಪ್ಪನವರ (60), ಬೈಲಹೊಂಗಲ ತಾಲೂಕಿನ ಅಮಟೂರ ಗ್ರಾಮದ ಈರನಗೌಡ ಅಣ್ಣಪ್ಪಗೌಡ ಪಾಟೀಲ(37), ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ಸಂದೀಪ ಪಾರಸ್‌ ಗಳಗ (32) ಜೀವಾವಧಿ ಶಿಕ್ಷೆಗೆ ಗುರಿಯಾದವರು. […]

ವಿಮಾನ, ಬಸ್‌ ನಿಲ್ದಾಣಕ್ಕೆ ರಾಣಿ ಚನ್ನಮ್ಮ ಹೆಸರಿಡಿ – Vijaya Karnataka

ಬೆಳಗಾವಿ: ಸಾಂಬ್ರಾ ವಿಮಾನ ಹಾಗೂ ನಗರ ಸಾರಿಗೆ ಬಸ್‌ ನಿಲ್ದಾಣಕ್ಕೆ ರಾಣಿ ಚನ್ನಮ್ಮ ಹೆಸರಿಡುವಂತೆ ಒತ್ತಾಯಿಸಿ ಸೋಮವಾರ ಸರ್ವೋದಯ ಸ್ವಯಂ ಸೇವಾ ಸಂಘದ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಸಾಂಬ್ರಾ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಲು ಸರಕಾರ ಮುಂದಾಗಿದೆ. ಹಾಗಾಗಿ ಜಿಲ್ಲಾಧಿಕಾರಿಗಳು ಜಿಲ್ಲೆಯ ಎಲ್ಲಕನ್ನಡ ಪರ ಸಂಘಟನೆಗಳ, ರಾಜಕೀಯ ಮುಖಂಡರ ಹಾಗೂ ಸಮಾಜ ಚಿಂತಕರ ಸಭೆ ಕರೆದು ಅಭಿಪ್ರಾಯ ಪಡೆದುಕೊಳ್ಳಬೇಕು. ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಚನ್ನಮ್ಮಳ ಹೆಸರು ಸಾಂಬ್ರಾ ವಿಮಾನ ಮತ್ತು ನಗರ ಸಾರಿಗೆ ಬಸ್‌ ನಿಲ್ದಾಣಕ್ಕೆ ಇಡಬೇಕು […]

ನರೇಗಾ ಕೆಲಸ ನೀಡುವಂತೆ ಪ್ರತಿಭಟನೆ – Vijaya Karnataka

ಬೆಳಗಾವಿ: ನರೇಗಾ ಯೋಜನೆಯಲ್ಲಿಕೆಲಸ ನೀಡಲು ನಿರಾಕರಿಸುವ ಗ್ರಾಪಂ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸೋಮವಾರ ಬೆಳಗಾವಿ ತಾಲೂಕಿನ ಮಣ್ಣೂರು ಗ್ರಾಮದ ಕೂಲಿ ಕಾರ್ಮಿಕರು ನಗರದ ತಾಪಂ ಕಚೇರಿ ಆವರಣದಲ್ಲಿಪ್ರತಿಭಟನೆ ನಡೆಸಿದರು. ಅಂಬೇವಾಡಿ ಗ್ರಾಪಂಗೆ ಮೂರು ತಿಂಗಳಿಂದ ನರೇಗಾ ಕೆಲಸಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದೇವೆ. ಆದರೆ, ಗ್ರಾಪಂನ ಅಧಿಕಾರಿಗಳು ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ನರೇಗಾ ಯೋಜನೆಯಡಿ ಕೆಲಸವನ್ನೂ ನೀಡುತ್ತಿಲ್ಲ. ಗ್ರಾಮದಲ್ಲಿನರೇಗಾ ಯೋಜನೆ ಸಂಪೂರ್ಣವಾಗಿ ಜಾರಿಯಾಗಿಲ್ಲಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಪಂ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ನರೇಗಾ ಯೋಜನೆಯಡಿ ಮಣ್ಣೂರ ಗ್ರಾಮದ ಕೂಲಿ ಕಾರ್ಮಿಕರಿಗೆ ಕೆಲಸ ನೀಡಬೇಕು. […]

ಪಿಒಪಿ ಮೂರ್ತಿ ತಯಾರಕರ ವಿರುದ್ಧ ಕ್ರಮಕ್ಕೆ ಆಗ್ರಹ – Vijaya Karnataka

ಬೆಳಗಾವಿ: ಪಿಒಪಿ ಗಣೇಶ ಮೂರ್ತಿ ತಯಾರಕರು ಮತ್ತು ಮಾರಾಟಗಾರರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸೋಮವಾರ ರಾಜ್ಯ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಕರ ಒಕ್ಕೂಟ ಹಾಗೂ ಶ್ರೀರಾಮ ಸೇನೆ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು. ಜಿಲ್ಲೆಯಲ್ಲಿಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ ಮತ್ತು ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಈ ಬಾರಿಯ ಗಣೇಶೋತ್ಸವದಲ್ಲಿಪಿಒಪಿ ಮೂರ್ತಿಗಳನ್ನು ಸಂರ್ಪೂಣವಾಗಿ ನಿಷೇಧಿಸಬೇಕು. ಪಿಒಪಿ ಮೂರ್ತಿ ತಯಾರಕರು ಮತ್ತು ಮಾರಾಟಗಾರರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಈ ವೇಳೆ ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ […]

‘ಉತ್ತರ’ದಲ್ಲಿಹೈ ಅಲರ್ಟ್‌ ಘೋಷಣೆ – Vijaya Karnataka

ಬೆಳಗಾವಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಪತ್ತೆಯಾದ ಹಿನ್ನೆಲೆಯಲ್ಲಿ ಬೆಳಗಾವಿ ಉತ್ತರ ವಲಯದ ಎಲ್ಲಜಿಲ್ಲೆಗಳಲ್ಲೂಜ.26ರ ವರೆಗೆ ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ. ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳ ಮೇಲೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್‌ ತಿಳಿಸಿದ್ದಾರೆ. ”ಹೊರ ರಾಜ್ಯ ಮತ್ತು ಸೂಕ್ಷ್ಮ ಪ್ರದೇಶಗಳಿಂದ ಜಿಲ್ಲೆಗಳಿಗೆ ಆಗಮಿಸುವ ಬಸ್‌, ರೈಲ್ವೆ ಮತ್ತು ವಿಮಾನ ಸೇರಿದಂತೆ ವಿವಿಧ ಸಾರಿಗೆ ವಾಹನಗಳ ಮೇಲೆ ಹೆಚ್ಚಿನ ನಿಗಾ ವಹಿಸಿ ತಪಾಸಣೆ ನಡೆಸಲು ಸೂಚನೆ ನೀಡಲಾಗಿದೆ. ಗಡಿ ಭಾಗದಲ್ಲಿಭದ್ರತಾ […]

ಸಿಎಎ ವಿರೋಧಿಸಿ ಡಿಎಸ್‌ಎಸ್‌ ಪ್ರತಿಭಟನೆ – Vijaya karnataka

ಬೆಳಗಾವಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಸೋಮವಾರ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಪ್ರತಿಭಟನೆ ನಡೆಸಿದರು. ಕೇಂದ್ರ ಸರಕಾರ ಸರ್ವ ಧರ್ಮವನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಬೇಕು. ಆದರೆ, ಒಂದು ಧರ್ಮವನ್ನು ಹೊರಗಿಟ್ಟು ಪೌರತ್ವ ಕಾಯ್ದೆ ಜಾರಿಗೆ ತಂದಿರುವುದು ಸರಿಯಲ್ಲ. ಇದರಿಂದ ದೇಶದಲ್ಲಿಜಾತಿಗಳ ನಡುವೆ ದ್ವೇಷ ಬೆಳೆಯುತ್ತದೆ. ಹಿಂದುಳಿದ ಸಮುದಾಯದ ಶೇ.80 ರಷ್ಟು ಜನರ ಹತ್ತಿರ ಸರಿಯಾದ ದಾಖಲೆಗಳಿಲ್ಲ. ಅಂತಹ ಜನರಿಗೆ ಸಮಸ್ಯೆಯಾಗುತ್ತದೆ. ಅನೇಕ ತಜ್ಞರು ಕೂಡ ಕಾಯ್ದೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಕೇಂದ್ರ ಸರಕಾರ […]

ಚಿಕಿತ್ಸೆ ಫಲಿಸದೆ ಗಾಯಾಳು ಸಾವು – Vijaya Karnataka

ಬೆಳಗಾವಿ: ಭೂತರಾಮನಟ್ಟಿ ಬಳಿ ಭಾನುವಾರ ಕಾರು ಪಲ್ಟಿಯಾಗಿ ಮರಕ್ಕೆ ಬಡಿದು ಗಾಯಗೊಂಡಿದ್ದ ನಾಲ್ವರು ಪ್ರಯಾಣಿಕರ ಪೈಕಿ ಒಬ್ಬ ಚಿಕಿತ್ಸೆ ಫಲಿಸದೆ ಸೋಮವಾರ ಮೃತಪಟ್ಟಿದ್ದಾನೆ. ನಗರದ ಶಹಾಪುರದ ಓಂಕಾರ ನಾರಾಯಣ ಬಾಳೆಕುಂದ್ರಿ (22) ಮೃತಪಟ್ಟಿದ್ದಾನೆ. ಇದರೊಂದಿಗೆ ಅಪಘಾತದಿಂದ ಇಬ್ಬರು ಜೀವ ಕಳೆದುಕೊಂಡಿದ್ದಾರೆ. ಇವರು ಪ್ರಯಾಣಿಸುತ್ತಿದ್ದ ಕಾರು ಭಾನುವಾರ ಬೆಳಗ್ಗೆ ಬೆಳಗಾವಿ ಕಡೆ ಬರುವಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಮರಕ್ಕೆ ಬಡಿದಿತ್ತು. ಆಗ ಅಭಿಷೇಕ ಧೋಂಗಡೆ (21) ಎನ್ನುವವ ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಓಂಕಾರ ಸೇರಿ ಗಾಯಗೊಂಡ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾಕತಿ ಠಾಣೆಯಲ್ಲಿಪ್ರಕರಣ […]