ಪ್ರೀತಿಸಿ ಮದುವೆಯಾದವನಿಗೆ ಕಾದಿತ್ತು ಶಾಕ್: ಮಗುವನ್ನು ನೋಡಲು ಬಂದ ಗಂಡನನ್ನೇ ಬರ್ಬರವಾಗಿ ಕೊಂದ ಹೆಂಡತಿ – News 18

ಬೆಳಗಾವಿಯ ಬೆಳಗಾವಿಯ ಲಕ್ಷ್ಮೀ ನಗರದಲ್ಲಿ ವಾಸವಾಗಿದ್ದ 28 ವರ್ಷದ ಕಿರಣ್ ಸವಿತಾಳನ್ನು ತುಂಬ ಪ್ರೀತಿಸುತ್ತಿದ್ದ. ಮನೆಯವರು ಒಪ್ಪದಿದ್ದರೂ ಹಠ ಮಾಡಿ ಆಕೆಯನ್ನು ಮದುವೆಯೂ ಆಗಿದ್ದ. ಮದುವೆಯಾಗಿ 5 ವರ್ಷ ಆಗುವಷ್ಟರಲ್ಲಿ ಇಬ್ಬರ ನಡುವೆ ಮನಸ್ತಾಪಗಳು ಎದುರಾಗಿತ್ತು. ಇವರಿಬ್ಬರಿಗೆ 2 ವರ್ಷದ ಮಗು ಕೂಡ ಇತ್ತು. ಗಂಡನೊಂದಿಗೆ ಜಗಳ ಮಾಡಿಕೊಂಡ ಸವಿತಾ ಕಿರಣ್​ನಿಂದ ದೂರವಾಗಲು ನಿರ್ಧರಿಸಿದ್ದಳು. ಆತನಿಂದ ಬೇರೆಯಾಗಿ ತವರು ಸೇರಿದ್ದ ಸವಿತಾ ತನ್ನ ಜೊತೆ ಮಗುವನ್ನೂ ಕರೆದುಕೊಂಡು ಬಂದಿದ್ದಳು.

ಪ್ರೀತಿಸುತ್ತಿದ್ದ ಹೆಂಡತಿಯ ನೆನಪು ಆಗಾಗ ಕಾಡುತ್ತಿದ್ದುದರಿಂದ ಕಿರಣ್​ ಖಿನ್ನತೆಗೊಳಗಾಗಿದ್ದ. ಹೆಂಡತಿಯೂ ಇಲ್ಲದೆ ಮುದ್ದಾದ ಮಗುವೂ ಇಲ್ಲದೆ ಒಂಟಿಯಾಗಿ ಬದುಕುತ್ತಿದ್ದ. ಬೆಂಗಳೂರಿಗೆ ಹೋಗಿದ್ದ ಹೆಂಡತಿ ಬೆಳಗಾವಿಗೆ ವಾಪಾಸ್​ ಬಂದಿದ್ದಾಳೆ ಎಂಬುದನ್ನು ತಿಳಿದ ಕಿರಣ್ ಆಕೆಯನ್ನು ಮತ್ತು ಮಗುವನ್ನು ಮಾತನಾಡಿಸಲು ಹೆಂಡತಿಯ ತವರುಮನೆಗೆ ಹೋಗಿದ್ದ. ಆದರೆ, ವಿಧಿಯಾಟವೇ ಬೇರೆ ಇತ್ತು.ತನ್ನನ್ನು, ಮಗುವನ್ನು ನೋಡಲು ಬಂದ ಗಂಡನ ಮೇಲೆ ಹರಿಹಾಯ್ದ ಸವಿತಾ ಆತನೊಂದಿಗೆ ಜಗಳವಾಡಿದ್ದಳು. ಇಬ್ಬರ ನಡುವೆ ಜಗಳ ತಾರಕಕ್ಕೇರಿದಾಗ ಸವಿತಾಳ ಅಪ್ಪ, ಅಮ್ಮ, ಅಣ್ಣನೂ ಸೇರಿಕೊಂಡು ಕಿರಣ್ ಜೊತೆ ಜಗಳವಾಡಿದ್ದರು. ಸವಿತಾಳ ವರ್ತನೆಯಿಂದ ಕೋಪಿಸಿಕೊಂಡ ಕಿರಣ್ ಆಕೆಗೆ ಹೊಡೆಯಲು ಮುಂದಾಗಿದ್ದ. ತಕ್ಷಣ ಸವಿತಾಳ ಮನೆಯವರು ಸೇರಿಕೊಂಡು ಆತನನ್ನು ಓಡಿಸಿಕೊಂಡು ಹೋಗಿದ್ದಾರೆ. ಅವರಿಂದ ತಪ್ಪಿಸಿಕೊಳ್ಳಲು ಕಿರಣ್ ಓಡುತ್ತಿದ್ದಂತೆ ಆತನಿಗೆ ಕಬ್ಬಿಣದ ರಾಡಿನಿಂದ ಹೊಡೆದು ಕೊಲೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರಣ್​ನ ಹೆಂಡತಿ ಸವಿತಾ, ಮಾವ ವಿಠ್ಠಲ್, ಅತ್ತೆ ಸುರೇಖಾ, ಬಾಮೈದನನ್ನು ಪೊಲೀಸರು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *