ಬೆಳಗಾವಿಯಲ್ಲಿ ಕೊನೆಗೂ ತಗ್ಗಿದ ಮಳೆರಾಯ; ಹಲವು ಗ್ರಾಮಗಳು ಜಲದಿಗ್ಬಂಧನದಿಂದ ಮುಕ್ತ – One India Kannada

ಬೆಳಗಾವಿ, ಆಗಸ್ಟ್ 12: ಬೆಳಗಾವಿಯಲ್ಲಿ ರುದ್ರರೂಪ ತಾಳಿದ್ದ ಮಳೆ ಇಂದು ಕೊಂಚ ತಗ್ಗಿದಂತಿದೆ. ಮಳೆಯ ಆರ್ಭಟ ಕುಗ್ಗಿದಂತೆ ಕಾಣುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಜನ ಕೊಂಚ ನಿಟ್ಟುಸಿರುಬಿಟ್ಟಿದ್ದಾರೆ. ಘಟಪ್ರಭಾ, ಮಲಪ್ರಭಾ, ಮಾರ್ಕಂಡೇಯ, ಬಳ್ಳಾರಿ ನಾಲೆಯ ನೀರಿನ ಮಟ್ಟದಲ್ಲೂ ಭಾರೀ ಇಳಿಕೆ ಕಂಡುಬಂದಿದೆ. ಕಳೆದೊಂದು ವಾರದಿಂದ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ 1ಲಕ್ಷ ಕ್ಯೂಸೆಕ್ಸ್ ಹರಿಸಲಾಗಿದ್ದು, ಇಂದು 37 ಸಾವಿರ ಕ್ಯೂಸೆಕ್ಸ್ ಹೊರಹರಿವು ಇವೆ. ನವೀಲು ತೀರ್ಥ ಡ್ಯಾಂನಿಂದ ಮಲಪ್ರಭಾ ನದಿಗೆ ಒಂದು ವಾರದಿಂದ 80 ಸಾವಿರ ಕ್ಯೂಸೆಕ್ಸ್ ನೀರು ಹರಿಸಲಾಗಿದ್ದು, ಇಂದು 11 ಸಾವಿರ ಕ್ಯೂಸೆಕ್ಸ್ ಹೊರಹರಿವು ಇದೆ.

ಮಳೆ ತಗ್ಗಿದ್ದರಿಂದ ಹಲವು ಗ್ರಾಮಗಳು ಜಲದಿಗ್ಬಂಧನದಿಂದ ಮುಕ್ತವಾಗುತ್ತಿವೆ. ಬಹುತೇಕ ಸೇತುವೆಗಳೂ ಸಂಚಾರ ಮುಕ್ತವಾಗಿವೆ. ಪ್ರವಾಹಕ್ಕೆ ಕೊಚ್ಚಿ ಹೋಗಿರುವ ಹಲವು ರಸ್ತೆಗಳಲ್ಲಿ ನೀರಿನ ಇಳಿಕೆ ಕಡಿಮೆಯಾಗುತ್ತಿದೆ. 3 ಲಕ್ಷ 80 ಸಾವಿರ ಕ್ಯೂಸೆಕ್ಸ್ ನೀರಿನೊಂದಿಗೆ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ ತೀರದಲ್ಲಿ ಮಾತ್ರ ಯಥಾಸ್ಥಿತಿ ಮುಂದುವರಿದಿದೆ.

 

 

 

Leave a Reply

Your email address will not be published. Required fields are marked *